Wednesday, August 4, 2010


ನೀನಿರದಾ ನಾಳೆಗಳ ನೆನೆಯುತ ಕಣ್ಣಾಲಿಗಳು ತುಂಬಿದೆ ಇಂದು ,
ನನಗಂದೆ ತಿಳಿದಿರಲಿಲ್ಲವೇ ನೀನಿರುವದು ನನಗಲ್ಲವೆಂದು ?

ಅತಿ ಆಸೆ ನನಗೆ , ತಿಳಿದೆ ನೀನನ್ನ ಬಂದು ಸೇರುವೆ ಎಂದು
ಸುಮ್ಮನೆ ಕಟ್ಟಿದೆ ನೀನೆಂದು ಇರಲಾರದ ಪ್ರೇಮಸೌಧವ ಅಂದು

ನೆನಪಿರಲಿ ನಿನಗೆ , ಈ ಸೌಧದ ಬಾಗಿಲು ತೆರೆದಿರುವುದು ನೀನಗಾಗಿ ಎಂದು
ಇರಲಿ ನೀಡೊಂದು ಭರವಸೆ , ನನ್ನೆಂದೂ ಮರೆಯಲಾರೆ ಎಂದು.

Friday, May 14, 2010

ಈ ಮುಂಗಾರು ತಂದಿದೆ ಮಣ್ಣಿಗೆ ಕಂಪು
ನನ್ನದೊಂದು ಆಸೆ ,
ನೀಡುವುದೇ ನನ್ನೆದೆಗೆ ಈ ಮಳೆಯು ತಂಪು ..?

ನನ್ನೆದೆಯು ಬರಡಾಗಿದೆ ವಿರಹದಾ ಬೇಗೆಯಲಿ ಬೆಂದು
ಕಾಯುತಿದೆ ಹೊಸದೊಂದು ಹಸಿರ ಚಿಗುರಿಗೆ ಇಂದು ..

ಬತ್ತಿದಾ ನದಿಯಲ್ಲೇ ಹರಿಯುತ್ತಂತೆ ಮತ್ತೊಮ್ಮೆ ನೀರು ಉಕ್ಕಿ
ಹರಿಯದೆ , ಬರಡಾದ ನನ್ನೆದೆಯಲ್ಲಿ ಇನ್ನೊಮ್ಮೆ ಒಲವು ಉಕ್ಕಿ ? :)

Monday, May 3, 2010




ನಿನ್ನಾ ಹೆಸರು ನನ್ನಾ ಉಸಿರಲ್ಲೆಲ್ಲಾ ಆವರಿಸಿದೆ
ಆದರೇನು ಓ ಗೆಳತಿ ,
ಈ ಹೃದಯವೆಂದೋ ಪ್ರೀತಿಯ ದ್ರೋಹಕ್ಕೆ ಕೊಲೆಯಾಗಿದೆ ..
ಆದರೂ ಈ ದೇಹ ಜಪಿಸುತ್ತಿದೆ ನಿನ್ನನ್ನೇ
ಹಾ , ಹಿಡಿಯಲಿದೆ ಅದೂ ಕೆಲದಿನಗಳಲಿ ಸಾವನ್ನೇ ...


ದಯವಿಟ್ಟು ಬೇಡ ಈ ದೇಹಕ್ಕೆ ಅಗ್ನಿಸ್ಪರ್ಶ
ಅದನ್ನಾಗಲೇ ಉರಿಸಿದೆ ಅಗಲಿದ ಪ್ರೇಮಸ್ಪರ್ಶ...
ನನ್ನಾಣೆಗೂ ,
ಈ ನನ್ನಾ ಬೂದಿಯು ಹಾರುವುದು ನಿನ್ನ ಸನಿಹವೇ ಚಿನ್ನಾ
ಗೆಳತಿ , ನನ್ನಾ ಒಲವಿನ ಸಾವು ಅಲ್ಲಿಗೆ ಧನ್ಯಾ....

Saturday, March 13, 2010



ಸುಮ್ಮನೆ ಕೂತಿರುವೆ ನಿನ್ನ ದಾರಿ ಕಾಯುತಾ,
ಕಳೆದು ಹೋಗಿರುವೆ ನೆನಪುಗಳ ಜಾತ್ರೆಯಲಿ ನಿನ್ನ ನೆನೆಯುತ,

ಇಂದೇಕೋ ಆಗುತಿದೆ ನಿನ್ನಿಂದ ದೂರಾಗುವ ಭಯ
ನನಗೀಗ ನೀಡುವೆಯಾ ಸಿಹಿ ಮುತ್ತಿನ ಅಭಯಾ

ದಯವಿಟ್ಟು ಕೂಗಿಕರೆ ಕನಸಲ್ಲಾದರೂ ನನ್ನೊಮ್ಮೆ
ಅದಕ್ಕಾಗಿಯೇ ಚದಪದಿಸುತ್ತಿರುವೆ ದಿನರಾತ್ರಿ ಕ್ಷಣಕೊಮ್ಮೆ..